SBS ಸೋಮವಾರಪೇಟೆ ರೇಂಜ್ ನೂತನ ಸಮಿತಿ ರಚನೆ


ಸೋಮವಾರಪೇಟೆ (TOC) : ಸೋಮವಾರಪೇಟೆ ರೇಂಜ್ SBS ನೂತನ ಸಮಿತಿ ರಚನೆ ಹಾಗೂ ವಿದ್ಯಾರ್ಥಿಗಳಿಗಿರುವ ತರಬೇತಿ ಶಿಬಿರವು ಗರಗಂದೂರು ನೂರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಝ ರಹ್ಮಾನಿ ಕಾಗಡಿಕಟ್ಟೆ ವಹಿಸಿದರು. ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೌಶಾದ್ ಅಶ್ರಫಿ ವಯನಾಡು ವಿದ್ಯಾರ್ಥಿಗಳಿಗೆ ತರಬೇತಿ ನಡೆಸಿಕೊಟ್ಟರು. ರೇಂಜ್ ಕಾರ್ಯದರ್ಶಿ ಹಸೈನಾರ್ ಮುಸ್ಲಿಯಾರ್ ನೂತನ ಸಮಿತಿ ರಚನೆಗೆ ನಾಯಕತ್ವ ನೀಡಿದರು ಸೋಮವಾರಪೇಟೆ ರೇಂಜ್ ವ್ಯಾಪ್ತಿಯಲ್ಲಿರುವ 18 ಮದ್ರಸಗಳ ವಿದ್ಯಾರ್ಥಿಗಳನ್ನೊಳಗೊಂಡ ಹೊಸ ಸಮಿತಿ ರಚಿಸಲಾಯಿತು. 
ಮುದಬ್ಬಿರ್:- ಹಂಝ ರಹ್ಮಾನಿ, ಸಿದ್ದೀಕ್ ಫಾಲಿಲಿ.
 ಅಧ್ಯಕ್ಷರು:- ಮುನೀಝ್ ಕಾಗಡಿಕಟ್ಟೆ
 ಕಾರ್ಯದರ್ಶಿ:- ಸುಫೈಲ್ ಬೋಯಿಕೇರಿ 
ಕೋಶಾಧಿಕಾರಿ:- ಝೈನುಲ್ ಆಬಿದ್ ಕಲ್ಕಂದೂರು ಉಪಾಧ್ಯಕ್ಷರು :- ರೋಶನ್ ಶುಂಠಿಕೊಪ್ಪ, ಶುರೈಫ್ ಹೊಸತೋಟ, 
ಜೊತೆ ಕಾರ್ಯದರ್ಶಿಗಳು:- ಹಬೀಬುಲ್ ಬಶರ್ ಗರಗಂದೂರು, ಜುನೈದ್ ಸೋಮವಾರಪೇಟೆ. 
 ಸದಸ್ಯರುಗಳು:- ನಿಝಾಂ ಕೂಡಿಗೆ, ತಾಬಿಷ್ ಮಾದಾಪುರ, ಆದಿಲ್ ಕರ್ಕಳ್ಳಿ, ಇರ್ಫಾನ್ ಗದ್ದೇಹಳ್ಳ, ಶಫೀಕ್ 7'ಹೊಸಕೋಟೆ, ಲತೀಫ್ ಬಾಳುಗೋಡು, ರಝಾಕ್ ದರ್ಗಾ, ರಿಯಾಝ್ ಮಂಜಿಕರ, ಸ್ವಾಬಿರ್ ತಣ್ಣೀರುಹಳ್ಳ. ಕಾರ್ಯಕ್ರಮದ ಕೊನೆಯಲ್ಲಿ ಸಿದ್ದೀಕ್ ಫಾಲಿಲಿ ವಂದಿಸಿದರು.
Previous Post
Next Post

0 Post a Comment: