ಕುಶಾಲನಗರ: ಭಾರತೀಯರೆಂದಮೇಲೆ ವೈವಿಧ್ಯತೆ ಸ್ವಾಭಾವಿಕವಷ್ಟೇ. ಹಲವು ಭಾಷೆ, ವೇಷ, ಆಚಾರ, ವಿಚಾರ, ಧರ್ಮ ಪಂಗಡಗಳ ಗೂಡು ಎಂಬುದನ್ನು ಹೇಳಬೇಕಾಗಿಲ್ಲ. ಇದಕ್ಕೆ ಪೂರಕವೆಂಬಂತೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ ಎಲ್ಲಾ ಧರ್ಮದ ವರ್ತಕರು ಹಾಗೂ ಸಿಬ್ಬಂದಿಗಳು ಸೇರಿ ಗಣೇಶ ಚತುರ್ಥಿಯನ್ನು ಆಚರಣೆ ಮಾಡಿ ಸಾಹೋದರತೆಯನ್ನು ಮೆರೆದಿದ್ದಾರೆ. ಎನ್.ಟಿ.ಸಿಯಲ್ಲಿ ಎಲ್ಲರೂ ಒಗ್ಗೂಡಿ ಸರ್ವ ಧರ್ಮೀಯರ ಹಬ್ಬಗಳಾದ ಗಣೇಶ ಚತುರ್ಥಿ, ರಂಜಾನ್, ಕ್ರಿಸ್ ಮಸ್ ಹಬ್ಬಗಳನ್ನು ಆಚರಿಸುತ್ತಾ ಬರುತ್ತಿದ್ದು, ಇಂದು ಸತತ ಮೂರನೇ ವರ್ಷದ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಮಧ್ಯಾಹ್ನ ೧೨ ಗಂಟೆಗೆ ಗೌರಿ, ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಕುಶಾಲನಗರದ ಪರಮೇಶ್ವರ್ ಭಟ್ ರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಎನ್.ಟಿ.ಸಿಯ ವರ್ತಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಗೆ ಆಗಮಿಸಿದ ಪ್ರವಾಸಿಗರು ಪಾಲ್ಗೊಂಡರು. ಈ ಸಂದರ್ಭ ಮಾತನಾಡಿದ ಪ್ರವಾಸಿ ಸಾಯಿ ಕೃಷ್ಣ, ಕೊಡಗಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಭೇಡಿ ನೀಡಿದ್ದೇವೆ. ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನಲ್ಲಿ ಇಲ್ಲಿನ ವರ್ತಕರು ಹಾಗೂ ಸಿಬ್ಬಂದಿಗಳು ಸೇರಿ ಅದ್ದೂರಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದಾರೆ. ಜಾತಿ, ಧರ್ಮವೆಂದು ಕಿತ್ತಾಡುವ ಈ ಕಾಲದಲ್ಲಿ ಸರ್ವ ಧರ್ಮೀಯರು ಸೇರಿ ಗಣೇಶ ಚತುರ್ಥಿಯನ್ನು ಆಚರಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು. ಎನ್.ಟಿ.ಸಿ ಕಚೇರಿ ಮುಖ್ಯಸ್ಥ ರಮೇಶ್ ಹಾಗೂ ಎನ್.ಟಿ.ಸಿ ವರ್ತಕ ಸಂಜೀವ್ ಮಾತನಾಡಿ, ಪ್ರತಿವರ್ಷದಂತೆ ಈ ಭಾರಿಯು ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ ಮಾಲೀಕರಾದ ಅಬ್ದುಲ್ ಸಲಾಂ ರಾವತರ್ ಅವರ ನೇತೃತ್ವದಲ್ಲಿ ಇಲ್ಲಿನ ವರ್ತಕರು ಹಾಗೂ ಸಿಬ್ಬಂದಿಗಳು ಸೇರಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದೇವೆ. ಮಂಗಳವಾರ ಮಧ್ಯಾಹ್ನ ೧ ಗಂಟೆಗೆ ವಿಶೇಷ ಪೂಜೆ ಹಾಗೂ ಎನ್.ಟಿ.ಸಿಯವರಿಗೆ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣಾ ಕಾರ್ಯಕ್ರಮವಿದ್ದು, ಬುಧವಾರ ಗೌರಿ, ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಲಾಗುವುದು ಎಂದರು. ಈ ಸಂದರ್ಭ ಎನ್.ಟಿ.ಸಿ ವ್ಯವಸ್ಥಾಪಕ ಹಕೀಂ, ವರ್ತಕರಾದ ಮುರುಳಿ ಅಂಚೆಮನೆ, ಮೈಸಿ, ಜಾನ್, ಸಹರ್, ಬಷೀರ್, ಸತೀಶ್, ಲೋಕೇಶ್, ಗಣೇಶ್, ಪ್ರವೀಣ್, ವೀರೇಶ್, ನಾಣಯ್ಯ, ನಾಣಯ್ಯ, ತಪಾಸ್ ದತ್ತ ಹಾಗೂ ಎನ್.ಟಿ.ಸಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸರ್ವಧರ್ಮೀಯರಿಂದ ಗಣೇಶ ಚತುರ್ಥಿ ಆಚರಿಸುವ ಮೂಲಕ ಸಾಹೋದರತೆ ಮೆರೆದ ನಿಸರ್ಗಧಾಮ ಟೂರಿಸ್ಟ್ ಸೆಂಟರ್
Categories:
Featured
ಕೊಡಗು
Publish Date:
September 03, 2019

0 Post a Comment: