ಕರ್ನಾಟಕದ ಹುಡುಗನಿಗೆ ಕೇರಳದಲ್ಲಿ ಸನ್ಮಾನ


ವರದಿ : ಟೈಮ್ಸ್ ಆಫ್ ಕೂರ್ಗ್
ಕುಟ್ಯಾಡಿ : ಉತ್ತರ ಕರ್ನಾಟಕ ಪ್ರಳಯ ಸಂಧರ್ಭ ಸೇತುವೆ ಮೇಲೆ ಧುಮ್ಮುಕ್ಕಿ ಹರಿಯುತ್ತಿರುವ ನೀರಿನಲ್ಲಿ ನಡೆದುಕೊಂಡು ಅಂಬ್ಯುಲೆನ್ಸ್ ಗೆ ದಾರಿ ತೋರಿಸಿದ ರಾಯಚೂರಿನ ಹುಡುಗ ವೆಂಕಟೇಶ್ ಗೆ ನೆರೆರಾಜ್ಯ ಕೇರಳದಲ್ಲಿ ಸನ್ಮಾನ ದೊರೆತಿದೆ. ಇತ್ತೀಚೆಗೆ ಸ್ವಾತಂತ್ರೋತ್ಸವ ಸಂಧರ್ಭ ರಾಯಚೂರು ಜಿಲ್ಲಾಡಳಿತ ವತಿಯಿಂದ ಶೌರ್ಯ ಪ್ರಶಸ್ತಿ ನೀಡಲಾಗಿತ್ತು. ಇದೀಗ ಕೇರಳದ ಕುಟ್ಯಾಡಿ ಎಂಬಲ್ಲಿಯ ಜನತೆಗೆ ವೆಂಕಟೇಶ್ ನನ್ನು ರಾಯಚೂರಿನಿಂದ ಕರೆದೊಯ್ದು ಸನ್ಮಾನಿಸಿದ್ದಾರೆ. ಸ್ಥಳಿಯ ಪತ್ರಕರ್ತ ರಶೀದ್ ಅವರು ತಾನೇ ಮುತುವರ್ಜಿ ವಹಿಸಿ ಕರೆತಂದಿದ್ದಾರೆ. ಬಡ ಕುಟುಂಬದ ಹುಡುಗನಾಗಿದ್ದರಿಂದ ಕುಟ್ಯಾಡಿ ಜನತೆ ಅಲ್ಲಿಯೇ ಸಹಾಯಹಸ್ತ ಚಾಚಿದ್ದಾರೆ.
ಜಮ್ಶ್ ಫರ್ನೀಚರ್ ವೆಂಕಟೇಶ್ ನ ಸಂಪೂರ್ಣ ವಿದ್ಯಾಭ್ಯಾಸ ವೆಚ್ಚಗಳನ್ನು ತಾವು ಭರಿಸಿಕೊಳ್ಳವುದಾಗಿ ಹೇಳಿದೆ. ಕುಟ್ಯಾಡಿ MIUP ಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ PTM COMMITEE ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೆಂಕಟೇಶ್ ಗೆ ಸುಸಜ್ಜಿತ ಮನೆ ನಿರ್ಮಿಸುವುದಾಗಿ ಕೂಡ ಹೇಳಿದೆ. ಪ್ರಮುಖ ಸಂಘಟನೆಯಾದ ಫೋಕಸ್ ಇಂಡಿಯಾ ಮನೆನಿರ್ಮಾಣ ಕಾರ್ಯದಲ್ಲಿ ಸಹಕರಿಸಲಿದೆ.

Previous Post
Next Post

0 Post a Comment: