ಕೂರ್ಗ್ ಜಂಇಯ್ಯತುಲ್ ಉಲಮಾ ಸಂಘಟನೆಗೆ ನವ ಸಾರಥ್ಯ


ಮಡಿಕೇರಿ (TOC ನ್ಯೂಸ್) : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅದೀನದ ಕೂರ್ಗ್ ಜಂಇಯ್ಯತುಲ್ ಉಲಮಾ(CJU) ನೂತನ ಅಧ್ಯಕ್ಷರಾಗಿ ಕೊಡಗು ಸಂಯುಕ್ತ ನಾಯಿಬ್ ಖಾಝಿ ಶೈಖುನಾ ಮಹಮೂದ್ ಉಸ್ತಾದ್, ಪ್ರಧಾನ ಕಾರ್ಯದರ್ಶಿಯಾಗಿ ಅನ್ವಾರುಲ್ ಹುದಾ ಸಾರಥಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಹಾಗೂ ಕೋಶಾಧಿಕಾರಿಯಾಗಿ ಎಮ್ಮೆಮಾಡು ಹುಸೈನ್ ಸಖಾಫಿ ಉಸ್ತಾದರನ್ನು ಆರಿಸಲಾಯಿತು. ಕೊಂಡಂಗೇರಿಯ ಶಾದಿ ಮಹಲಿನಲ್ಲಿ ಶರಫುಲ್ ಉಲಮಾ ಅನುಸ್ಮರಣೆ ಹಾಗೂ ಜಿಲ್ಲಾ ಉಲಮಾ ಸಂಗಮವು ನಡೆಯಿತು. ಸಯ್ಯದ್ ಕಿಲ್ಲೂರು ತಂಙಳ್ ರವರ ನೇತೃತ್ವದಲ್ಲಿ ಝಿಯಾರತ್ ಹಾಗೂ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸಯ್ಯಿದ್ ಇಲ್ಯಾಸ್ ತಂಙಳ್ ಧ್ವಜಾರೋಹಣ ನೆರವೇರಿಸಿದರೆ ಶೈಖುನಾ ಮಹಮೂದ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಹುಸೈನ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಮಜೀದ್ ಮದನಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಉಮರ್ ಸಖಾಫಿ ವರದಿ ಹಾಗೂ ಹಫೀಳ್ ಸಅದಿ ಲೆಕ್ಕ ಪತ್ರ ಮಂಡಿಸಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರೂ ಕರ್ನಾಟಕ ಜಂಇಯ್ಯತುಲ್ ಉಲಮಾ ಅದ್ಯಕ್ಷರೂ ಆದ ತಾಜುಲ್ ಪುಖಹಾ ಶೈಖುನಾ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್'ರವರು ನವ ಸಾರಥಿಗಳ ಹಾಗೂ 40 ಮುಶಾವರ ಸದಸ್ಯರ ಹೆಸರನ್ನು ಘೋಷಣೆ ಮಾಡಿದರು. ನಂತರ ಬೇಕಲ ಉಸ್ತಾದರ ತರಗತಿ ನಡೆಯಿತು. ಕಾಲಗಟ್ಟಕ್ಕೆ ಉಲಮಾಗಳ ಅನಿವಾರ್ಯತೆ ಹಾಗೂ ಉಲಮಾಗಳ ಜವಾಬ್ದಾರಿಯ ಕುರಿತು ಸವಿಸ್ತಾರವಾಗಿ ವಿವರಿಸಿದರು. ಜಿಲ್ಲೆಯಿಂದ ಆಯ್ದ 350 ರಷ್ಟು ಉಲಮಾ ಗಳು ಭಾಗವಹಿಸಿದ್ದರು. ಅಹ್ಸನಿ ಉಸ್ತಾದ್ ಸ್ವಾಗತಿಸಿ ಉಮರ್ ಸಖಾಫಿ ವಂದಿಸಿದರು.

Previous Post
Next Post

0 Post a Comment: