ಕುಶಾಲನಗರದಲ್ಲಿ ಕಾಂಗ್ರೆಸ್ ನಾಯಕರ ಬಂಧನ : ಡಿಸಿಎಂ ವಿರುದ್ಧ ಕಪ್ಪುಪಟ್ಟಿ‌ ‌ಧರಿಸಿ ಪ್ರತಿಭಟನೆ


ಮಡಿಕೇರಿ:  ಅತೀವೃಷ್ಠಿ ಹಿನ್ನಲೆ ಕೊಡಗಿಗೆ ಭೇಟಿ ನೀಡಿದ ಡಿಸಿಎಂ. ಗೋವಿಂದಕಾರಜೋಳ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಗೆ ಸಜ್ಜಾದ ಕಾಂಗ್ರೆಸ್ ನಾಯಕರು.ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಪೋಲೀಸರು. ಡಿಸಿಎಂ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು. ಪ್ರತಿಭಟನೆ ಮಾಡದಿದ್ದರೂ ಬಂಧನಕ್ಕೆ ಮುಂದಾದ ಪೋಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಜಿ.ಪಂ. ಕೆ.ಪಿ. ಚಂದ್ರಕಲಾ.ಪಟ್ಟಣದ ಗಣಪತಿ ದೇವಸ್ಥಾನದ ಬಳಿ ಬಿಜೆಪಿ ವರ್ಸಸ್ ಕಾಂಗ್ರೆಸ್ ವಿರುದ್ಧ ಗಲಾಟೆ ಗದ್ದಲ. ಕಾರ್ಯಪ್ಪ ವೃತ್ತದ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ನಡೆಸಿದ ಕಾಂಗ್ರೆಸ್ ನಾಯಕರ ವಿರುದ್ಧ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು.ಪೋಲೀಸರು ಮಧ್ಯ ಪ್ರವೇಶ. ಘಟನೆ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಅವರ ಕಾಲಿಗೆ ಗಾಯಗ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ವಿ.ಪಿ.ಶಶಿಧರ್ ಪ್ರಮುಖರಾದ ಮಂಜುನಾಥ್ ಗುಂಡೂರಾವ್ ಪ್ರಮೋದ್ ಮುತ್ತಪ್ಪ ಖಲೀಮುಲ್ಲಾ ಡಿಕೆಶಿ ಅಭಿಮಾನಿ ಬಳಗದ ತಾ.ಅಧ್ಯಕ್ಷ ರಿಸ್ವಾನ್ ಮಾಜಿ ಗ್ರಾ.ಪಂ ಗೀತಾಗೌಡ ಸೇರಿದಂತೆ ಇಪ್ಪತ್ತಕ್ಕೂ ಹೆಚ್ವು ಕಾಂಗ್ರೆಸ್ ಕಾರ್ಯಕರ್ತರ ಬಂಧನ.

Previous Post
Next Post

0 Post a Comment: