ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್, ಸ್ವಲಾತ್ ಮಜ್ಲಿಸ್ ಮತ್ತು ವಾರ್ಷಿಕ ಮಹಾ ಸಭೆ


ಮಡಿಕೇರಿ :ರಿಯಾದ್, ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಶಿಯೇಶನ್ ರಿಯಾದ್ ಸಮಿತಿ ಇದರ ವಾರ್ಷಿಕ ಮಹಾಸಭೆ ಮತ್ತು ಮಾಸಿಕ ಸ್ವಲಾತ್ ಮಜ್ಲಿಸ್ ಅಲ್ ಮಾಸ್ ರೆಸ್ಟೋರೆಂಟ್ ನಲ್ಲಿ ನಡೆಯಲಾಯಿತು. ಸಯ್ಯದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ, ಸುಲೈಮಾನ್ ಸಾದಿ, ಹಂಸ ಮುಸ್ಲಿಯಾರ್ ಪೊನ್ನಂಪೇಟೆ ಇವರು ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಿದ್ದರು. ಕಿಸ್ವಾ ರಿಯಾದ್ ಸಮಿತಿಯ ವಾರ್ಷಿಕ ಸಭೆ, ಸಯ್ಯದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಂಸ ಉಸ್ತಾದ್ ಚೋಕಂಡಳ್ಳಿ ಸ್ವಾಗತಿಸಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಿದ್ದೀಖ್ ಝುಹ್ರಿ ಅವರು ಉದ್ಘಾಟಿಸಿದರು. ಕಿಸ್ವಾ ಸಂಘಟನೆಯ ಕುರಿತು ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕರೆ ಮಾತನಾಡಿದರು. ನೂತನ ಸಮಿತಿ ಅಧ್ಯಕ್ಷರಾಗಿ ಸಯ್ಯದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಎಮ್ಮೆಮಾಡು, ಖಜಾಂಚಿಯಾಗಿ ಹಂಸ ಉಸ್ತಾದ್ ಚೋಕಂಡಳ್ಳಿ , ಹಾಗೂ 10 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
                        ---- ಜಾಹೀರಾತು ----

 ಈ ವರ್ಷ ಹಜ್ಜ್ ನಿರ್ವಹಿಸಲು ಬಂದವರಿಗೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದ , ಕಿಸ್ವಾ ಸದಸ್ಯರುಗಳಾದ ಅಬ್ಬಾಸ್ ಹಾಜಿ ಹಾಕತ್ತೂರು, ಮುಸ್ತಫ ಝೈನಿ ಕಂಬಿಬಾಣೆ, ಸತ್ತಾರ್ ಚಾರಂಬಾಣೆ, ಖಾದರ್ ಎಮ್ಮೆಮಾಡು ರವರನ್ನು ಸನ್ಮಾನಿಸಲಾಯಿತು. ಸೌದಿಅರೇಬಿಯ ರಾಷ್ಟ್ರೀಯ ಸಮಿತಿ ಸದಸ್ಯ ರಫೀಖ್ ತಂಙಳ್ ಮಾಲ್ದಾರೆ, ಸಹ ಕಾರ್ಯದರ್ಶಿ ಸಮದ್ ಕೊಟ್ಟಮುಡಿ , ಕಿಸ್ವಾ ದಮ್ಮಾಮ್ ಝೋನಲ್ ಪ್ರಧಾನ ಕಾರ್ಯದರ್ಶಿ ನಿಝಾಂ ಅಂಬಟ್ಟಿ ದಮ್ಮಾಮ್ ಝೋನಲ್ ವೆಲ್ಫೇರ್ ಚೆಯರ್ಮೇನ್ ಆದಂ ಕಂಡಕ್ಕರೆ ಉಪಸ್ಥಿತರಿದ್ದರು.
                       ---- ಜಾಹೀರಾತು ----

Previous Post
Next Post

0 Post a Comment: