ನಮ್ಮ ಕೊಡಗು ತಂಡದ ಅಧ್ಯಕ್ಷರಾದ ನೌಶಾದ್ ಜನ್ನತ್ ಮಾತನಾಡಿ ಈಗಾಗಲೇ ನೆರೆ ಹಾವಳಿಗೆ ನಲುಗಿದ ಸುಮಾರು ಎಂಟನೂರು ಕುಟುಂಬಗಳಿಗೆ ಈಗಾಗಲೇ ಹಲವಾರು ಸಂಘಸಂಸ್ಥೆಗಳ ಸಹಾಯದಿಂದ ಬೇಕಾದ ದವಸ ದಾನ್ಯ ಗಳನ್ನು ತಲುಪಿಸಿದ್ದು ಮುಂದಿನ ದಿನಗಳಲ್ಲಿ ನಿರಾಶ್ರೀತ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹಾಗೂ ಮಕ್ಕಳನ್ನು ದತ್ತು ತೆಗೆದು ವಿದ್ಯಾಭ್ಯಾಸ ಕೊಡುವ ಸಲುವಾಗಿ ಪ್ರಯತ್ನ ಪಡುವುದಾಗಿ ತಿಳಿಸಿದರು. ಹಾಗೂ ಕಾರ್ಯಕ್ರಮದಲ್ಲಿಜೈ ಕಿರಣ್ ನೇತೃತ್ವದ ಬನವಾಸಿ ಕನ್ನಡಿಗರು ಮತ್ತು ಉದಯ್ ಮತ್ತು ಚಂದನ್ ನೇತೃತ್ವದ ವೇ ಫಾರ್ ಲೈಫ್ ಹಾಗೂ ತಂಡಗಳಿಗೆ ಬೇಕಾದ ಸಾರಿಗೆ ಮತ್ತು ವಸತಿ ವ್ಯವಸ್ಥೆಯನ್ನು ನಿರ್ದೇಶಕರಾದ ಸಂತೋಷ್ ಕೋಡಂಕೇರಿ ಮಾಡಿದ್ದರು . ಹಾಗೂ ಕಿರಣ್ ಮಾಯಿ, ಅಜಿತ್ ಕೋಟ ಕೇರಿಯನ, ಉಮೇಶ್, ರೋಷನ್, ಲೋಹಿತ್, ಬಶೀರ್, ರೆಜಿತ್ ಕುಮಾರ್, ಗಿರೀಶ್ ಜಾಸ್ನ, ಕೃಷ್ಣ, ಸೀಮಾ ಮುಂತಾದವರು ಉಪಸ್ಥಿತರಿದ್ದರು .
ಬೆಂಗಳೂರು ಬನವಾಸಿ ಕನ್ನಡಿಗರು ಮತ್ತು ವೇ ಫಾರ್ ಲೈಫ್ ವತಿಯಿಂದ ನಮ್ಮ ಕೊಡಗು ತಂಡದ ಸಾರಥ್ಯದಲ್ಲಿ ಸಂತ್ರಸ್ತ್ರರಿಗೆ ಧಾನ್ಯ ವಸ್ತುಗಳ ವಿತರಣೆ
Categories:
Featured
ಕೊಡಗು
Publish Date:
September 12, 2019


0 Post a Comment: