ಕುಶಾಲನಗರದಲ್ಲಿ ಸರಳವಾಗಿ ಗಣೇಶ ಚತುರ್ಥಿ ಆಚರಣೆ 


ಕುಶಾಲನಗರ,ಸೆ೨: ಕೊಡಗಿನಲ್ಲಿ ಆವರಿಸಿದ ಪ್ರವಾಹದ ಹಿನ್ನಲೆ ವ್ಯಾಪಾರ ವಹಿವಾಟುಗಳು ನೆಲಕಚ್ಚಿದ್ದು, ಕುಶಾಲನಗರದಲ್ಲಿ ಸರಳವಾಗಿ ಗಣೇಶ ಚತುರ್ಥಿ ಆಚರಣೆ ಮಾಡಲಾಯಿತು. ಕುಶಾಲನಗರದ ಬೈಚನಹಳ್ಳಿ, ರಥಬೀದಿ, ಟೌನ್ ಕಾಲೋನಜ ಸೇರಿದಂತೆ ಪಟ್ಟಣದ ಹಲವು ಬಡಾವಣೆಗಳಲ್ಲಿ ಗೌರಿ, ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಗಣೇಶಹೋಮ ಮುಂತಾದ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುತ್ತಿರುವ ಹಿನ್ನಲೆ ಗೌರಿ ಗಣೇಶನ ಪ್ರತಿಷ್ಠಾಪಿಸಿದ ದಿನದಂದೇ ವಿಸರ್ಜಿಸಲಾಯಿತು. ಈ ಸಂದರ್ಭ ಮಾತನಾಡಿದ ಮಾರಿಯಮ್ಮ ಸೇವಾ ಟ್ರಸ್ಟ್ ಪ್ರಮುಖರಾದ ರಾಮಕೃಷ್ಣ ಹಾಗೂ ಟೌನ್ ಕಾಲೋನಿಯ ನಿವಾಸಿ ಕೀರ್ತಿರಾಜ್, ಪ್ರತೀ ವರ್ಷ ಬಹಳ ಅದ್ದೂರಿಯಾಗಿ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದೆವು. ಆದರೆ ಈ ಭಾರಿ ಸರಳವಾಗಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು. ಈ ಸಂದರ್ಭ ಟೌನ್ ಕಾಲೋನಿಯ ಪುಟಾಣಿ ಮಕ್ಕಳು ಗೌರಿ, ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಾರ್ವಜನಿಕರ ಕಣ್ಮನ ಸೆಳೆದವು.
Previous Post
Next Post

0 Post a Comment: