ಡಿ.ಕೆ ಶಿವಕುಮಾರ್ಗೆ ಸಿಗದ ಜಾಮೀನು...


ನವದೆಹಲಿ(TOC ನ್ಯೂಸ್): ದೆಹಲಿಯ ನಿವಾಸದಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇ.ಡಿ.ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಇಡಿ ಮತ್ತು ಡಿಕೆಶಿ ವಾದ ಪ್ರತಿವಾದಗಳು ಆಲಿಸಿದ ನ್ಯಾ. ಅಜಯ್ ಕುಮಾರ್ ಕುಹರ್ ಅವರು, ಡಿಕೆಶಿ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು.

ಜಾಮೀನು ಸಿಗದ ಕಾರಣ ನ್ಯಾಯಾಂಗ ಬಂಧನದಲ್ಲಿ ಇರುವ ಡಿಕೆ ಶಿವಕುಮಾರ್​ ಅಕ್ಟೋಬರ್​ 1ರವರೆಗೂ ತಿಹಾರ್ ಜೈಲಿನಲ್ಲೇ ಇರಬೇಕಾಗಿದೆ. ಜೊತೆಗೆ ಜಾಮೀನಿಗಾಗಿ ದೆಹಲಿ ಹೈಕೋರ್ಟ್​ ಮೊರೆಹೋಗುವ ನಿರೀಕ್ಷೆಯಿದೆ.
Previous Post
Next Post

0 Post a Comment: