ಪುತ್ತೂರು (TOC ದ.ಕ) : ಮೈಸೂರು - ಮಾಣಿ ಹೆದ್ದಾರಿ ನಡುವಿನ ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವು ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಅಸು ನೀಗಿರುವ ಧಾರುಣ ಘಟನೆ ನಡೆದಿದೆ.ಸುಂಟಿಕೊಪ್ಪ ನಿವಾಸಿ ಅಂಚೆ ಇಲಾಖಾ ಸಿಬ್ಬಂದಿ ನಿಡ್ಯಮಲೆ ಅಶೋಕ್ ಮತ್ತು ಅವರ ಪತ್ನಿ ಅತ್ತೂರು ನಲ್ಲೂರು ಶಾಲೆಯ ಶಿಕ್ಷಕಿ ಹೇಮಲತಾ ಮಕ್ಕಳಾದ ವರ್ಷ ಹಾಗೂ ಕಿರಣ್ ಮೃತ ದುರ್ದೈವಿಗಳಾಗಿದ್ದಾರೆ. ಅಶೋಕ್ ರವರ ಹಿರಿಯ ಪುತ್ರಿ ಮೂಡುಬಿದಿರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಅವಳನ್ನು ನೋಡಲೆಂದು ಇಂದು ಮುಂಜಾನೆ ೪.೩೦ರ ಸಮಯದಲ್ಲಿ ಮಾರುತಿ ಆಲ್ಟೊ ಕಾರಿನಲ್ಲಿ ಮೂಡುಬಿದಿರೆಗೆ ಪ್ರಯಾಣ ಬೆಳೆಸಿದ್ದಾರೆ. ಮಾರ್ಗಮಧ್ಯದ ಕೌಡಿಚ್ಚಾಡ್ ಎಂಬಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಕೆರೆಯೊಳಗೆ ಹಾರಿದೆ. ಪರಿಣಾಮ ಕಾರಿನಿಂದ ಹೊರ ಬರಲಾಗದೆ ನಾಲ್ವರು ಕಾಲನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ವಿಷಯವರಿತು ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ಕಾರನ್ನು ಮತ್ತು ನಾಲ್ವರ ಮೃತದೇಹವನ್ನು ಮೇಲಕ್ಕೆ ತರಲಾಯಿತು. ಪುತ್ತೂರು ಆಸ್ಪತ್ರೆಯಲ್ಲಿ ಮೃತರ ದೇಹಗಳನ್ನು ಇರಿಸಲಾಗಿದೆ.
ಪುತ್ತೂರು ಸಮೀಪ ಕೆರೆಗೆ ಉರುಳಿದ ಕಾರು : ಕೊಡಗಿನ ನಾಲ್ವರು ಮೃತ್ಯು
Categories:
Featured
ಕೊಡಗು
ದಕ್ಷಿಣ ಕನ್ನಡ
Publish Date:
September 01, 2019
ಪುತ್ತೂರು (TOC ದ.ಕ) : ಮೈಸೂರು - ಮಾಣಿ ಹೆದ್ದಾರಿ ನಡುವಿನ ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವು ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಅಸು ನೀಗಿರುವ ಧಾರುಣ ಘಟನೆ ನಡೆದಿದೆ.ಸುಂಟಿಕೊಪ್ಪ ನಿವಾಸಿ ಅಂಚೆ ಇಲಾಖಾ ಸಿಬ್ಬಂದಿ ನಿಡ್ಯಮಲೆ ಅಶೋಕ್ ಮತ್ತು ಅವರ ಪತ್ನಿ ಅತ್ತೂರು ನಲ್ಲೂರು ಶಾಲೆಯ ಶಿಕ್ಷಕಿ ಹೇಮಲತಾ ಮಕ್ಕಳಾದ ವರ್ಷ ಹಾಗೂ ಕಿರಣ್ ಮೃತ ದುರ್ದೈವಿಗಳಾಗಿದ್ದಾರೆ. ಅಶೋಕ್ ರವರ ಹಿರಿಯ ಪುತ್ರಿ ಮೂಡುಬಿದಿರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಅವಳನ್ನು ನೋಡಲೆಂದು ಇಂದು ಮುಂಜಾನೆ ೪.೩೦ರ ಸಮಯದಲ್ಲಿ ಮಾರುತಿ ಆಲ್ಟೊ ಕಾರಿನಲ್ಲಿ ಮೂಡುಬಿದಿರೆಗೆ ಪ್ರಯಾಣ ಬೆಳೆಸಿದ್ದಾರೆ. ಮಾರ್ಗಮಧ್ಯದ ಕೌಡಿಚ್ಚಾಡ್ ಎಂಬಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಕೆರೆಯೊಳಗೆ ಹಾರಿದೆ. ಪರಿಣಾಮ ಕಾರಿನಿಂದ ಹೊರ ಬರಲಾಗದೆ ನಾಲ್ವರು ಕಾಲನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ವಿಷಯವರಿತು ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ಕಾರನ್ನು ಮತ್ತು ನಾಲ್ವರ ಮೃತದೇಹವನ್ನು ಮೇಲಕ್ಕೆ ತರಲಾಯಿತು. ಪುತ್ತೂರು ಆಸ್ಪತ್ರೆಯಲ್ಲಿ ಮೃತರ ದೇಹಗಳನ್ನು ಇರಿಸಲಾಗಿದೆ.

0 Post a Comment: