#ನಲ್ಮಿಡಿ ಚಾರ್ಮಾಡಿ
ತಪ್ಪು! ತಪ್ಪು ತಪ್ಪಲ್ಲ,,
ತಪ್ಪಿನ ಅರಿವಾಗದಿರೋದು ತಪ್ಪು!
ತಪ್ಪನ್ನು ಸಮರ್ಥಿಸಿಕೊಳ್ಳುವುದು ಮಹಾ ತಪ್ಪು..!
ತಪ್ಪಿಗಾಗಿ ಸರ್ವವನ್ನು ಕಳೆದುಕೊಂಡು ಸಾಯುವುದು ಮಹಾ ಮಹಾ ತಪ್ಪು..!
ನಿಜ!
ನಿಜ ನುಡಿಯಲು ಕಷ್ಟ...
ನುಡಿದರೆ ಬಾಳಲು ಇನ್ನಷ್ಟು ಸ್ಪಷ್ಟ..
ಕಹಿಯಾದರೂ,ಆಡಿದರೆ ನುಂಗಬಹುದು ಇಷ್ಟ..
ಹೊತ್ತಿನ ರಕ್ಷಣೆಗಾಗಿ ಸಾವಿರ ತಪ್ಪು,
ಮಾಡುವುದು ನಷ್ಟ...
ಕಷ್ಟ!
ಕಷ್ಟ ಎಂಬುದು ನಿನ್ನ ಶಂಕೆ..
ಪಟ್ಟರೆ,ಕೂಡುವುದು ಹಿಂದೆ ಸಂಖ್ಯೆ!
ತಪ್ಪಿದರೆ,ಜೀವಾಂತ್ಯ ಡೊಂಕೆ..
ಬೇಕಾಗಿಲ್ಲ ಯಾರಿಗೂ ನಿನ್ನ ಈ ಜಗಕೆ!
ಇಷ್ಟ!
ಇಷ್ಟಪಟ್ಟು ಕಷ್ಟಪಡು..
ಎಂದಾದರೆ ಸ್ಪಷ್ಟವಾಗೋದು!
ಇಷ್ಟ;ಕಷ್ಟವನ್ನು ತೋರ್ಪಡಿಸಿ
ವಸ್ತುವಿನ ಮೇಲೆ ಒಲವು ಮೂಡಿಸುತ್ತದೆ!
ನಷ್ಟ!
ಸಾಧನೆ ಮತ್ತು ಪ್ರತಿಭೆ ಪ್ರತಿಮೆಗಳಂತೆ ತೂಗಾಡುತ್ತಿವೆ.. ಬೆಲೆಕಟ್ಟಿ ನೇತಾಕಿಯೂ ಇದೆ!
ಆದರೆ,ಲಾಭ ಕಾಣುತ್ತಿದೆ.. ನಿದ್ದೆ ನಿನ್ನ ದಾಸನಂತೆ!
ನೀನು ಪ್ರಿಯತಮೆಯಂತೆ!
ಕೊನೆಗೆ,ನಷ್ಟದ ವ್ಯಥೆಯು ಹರಿಯುವುದು ರಕ್ತದಂತೆ..!
ನಷ್ಟ ಎದ್ದು ಎದ್ದು ಕಾಣುತ್ತಿದೆ!

0 Post a Comment: