ಬೆಂಗಳೂರಿನಲ್ಲಿ ಗೂಗಲ್ ಅರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಪ್ರಯೋಗಾಲಯ ಸ್ಥಾಪನೆ...


ಬೆಂಗಳೂರು (TOC ನ್ಯೂಸ್): ಜಾಗತಿಕ ದೈತ್ಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ  ಕೃತಕ ಬುದ್ದಿಮತ್ತೆ ಪ್ರಯೋಗಾಲಯವನ್ನು (ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ ಲ್ಯಾಬ್) ಸ್ಥಾಪಿಸುತ್ತಿದೆ. 
ಗೂಗಲ್ ರಿಸರ್ಜ್ ಇಂಡಿಯಾ  ಬೆಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದ್ದು, ದೇಶದಲ್ಲಿ ಕೃತಕ ಬುದ್ದಿಮತ್ತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಈ ಸಂಸ್ಥೆ ನೀಡಲಿದೆ. 

ಬೆಂಗಳೂರಿನ ಐಐಐಟಿಯ ಇನ್ಪೂಸಿಸ್ ಫೌಂಡೇಷನ್ ಮುಖ್ಯ ಪ್ರೊಫೆಸರ್ ಮನೀಶ್ ಗುಪ್ತಾ  ಗೂಗಲ್  ಇಂಟೆಲಿಜೆನ್ಸಿ  ಲ್ಯಾಬ್ ನ ಮುಖ್ಯಸ್ಥರಾಗಲಿದ್ದು, ಹಾರ್ವಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮಿಲಿಂದ್ ತಂಬೆ ಇದರ ನಿರ್ದೇಶಕರಾಗಲಿದ್ದಾರೆ 
ಬೆಂಗಳೂರಿನ ಲ್ಯಾಬ್ ನಿಂದ ಗೂಗಲ್ ಜಾಲದಲ್ಲಿನ ಸಂಶೋಧಕರು, ಸಮ್ಮೇಳನಗಳಲ್ಲಿ ಪಾಲ್ಗೊಳ್ಳಲು, ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಲು ನೆರವಾಗಲಿದೆ ಎಂದು ಗೂಗಲ್ ಎಐಸಿ ಉಪಾಧ್ಯಕ್ಷ ಜಯ್ ಯಾಗ್ನಿಕ್ ತಿಳಿಸಿದ್ದಾರೆ.
 
Previous Post
Next Post

0 Post a Comment: