Home
ಕೊಡಗು
SSF ಕೊಡಗು ಜಿಲ್ಲಾ ಸಮಿತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ S M ಇಬ್ರಾಹಿಂ ಮಾಸ್ಟರ್ ಗೆ ಸನ್ಮಾನ
SSF ಕೊಡಗು ಜಿಲ್ಲಾ ಸಮಿತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ S M ಇಬ್ರಾಹಿಂ ಮಾಸ್ಟರ್ ಗೆ ಸನ್ಮಾನ
ಸೋಮವಾರಪೇಟೆ (TOC ನ್ಯೂಸ್) : ಕೊಡಗು ಜಿಲ್ಲಾ ಮಟ್ಟದ "ಉತ್ತಮ ಶಿಕ್ಷಕ" ಪ್ರಶಸ್ತಿ ಪುರಸ್ಕೃತ S M ಇಬ್ರಾಹಿಂ ಮಾಸ್ಟರ್‌ರವರನ್ನು ಅವರನ್ನು SSF ಕೊಡಗು ಜಿಲ್ಲಾ ಸಮಿತಿಯಿಂದ ಕಿರುಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿ ಕೊಡ್ಲಿಪೇಟೆ ನೇತೃತ್ವದ ತಂಡವು ಮಾಸ್ಟರ್‌ರವರು ಸೇವೆ ಸಲ್ಲಿಸುತ್ತಿರುವ ನೇರುಗಳೆಲೆ ಪ್ರೌಢಶಾಲೆಗೆ ತೆರಳಿ ಸನ್ಮಾನ ನೀಡಿತು.. ಈ ಸಂಧರ್ಭ ರಾಜ್ಯಾದ್ಯಂತ ಸುದ್ಧಿಯಾದಂತಹ ಅವರ ಪರಿಶ್ರಮದ ವಿಜ್ಞಾನ ಪ್ರಯೋಗಾಲಯ,ಗ್ರಂಥಾಲಯಗಳನ್ನು ಸಂಧರ್ಶಿಸಿದೆವು..ಈ ಅದ್ಭುತ ಪ್ರಯೋಗಾಲಯದ ನಿರ್ಮಾಣಕ್ಕೆ ಸಹ ಶಿಕ್ಷಕರ ಸಾಥ್,ತನ್ನ ವಿಧ್ಯಾರ್ಥಿಗಳ ಸಹಕಾರ ಊರಿನವರ ಬೆಂಬಲ ಎಲ್ಲವನ್ನೂ ಇಬ್ರಾಹಿಂರವರು ಕೃತಜ್ಞತಾ ಪೂರ್ವಕ ಸ್ಮರಿಸಿದರು. ಮುಖ್ಯೋಪಾದ್ಯಾಯರಾದ ಲೀಲಾವತಿರವರು ಹಾಗೂ ಇತರ ಶಿಕ್ಷಕ ವೃಂದವು ಇಬ್ರಾಹಿಂರವರು ಸನ್ಮಾನಿತರಾಗುವ ವೇಳೆ ಹರ್ಷಚಿತ್ತರಾದರು.. SSF ಜಿಲ್ಲಾ ಉಪಾಧ್ಯಕ್ಷರಾದ ಶಾಫಿ ಸಅದಿ ಮಾತನಾಡಿದರು. ಸೌಕರ್ಯವಿರುವ ಒಂದು ಶೌಚಾಲಯದ ಬೇಡಿಕೆಯನ್ನು ಸಂಘಟನೆಯ ಮುಂದಿಟ್ಟಿದ್ದು..ಶ್ರಮಪಡುವೆವು..ಎಂದು SSF ನಾಯಕರು ತಿಳಿಸಿದರು. SM ಇಬ್ರಾಹಿಂ ಮಾಸ್ಟರರ ಸಾಧನೆಯನ್ನು ಕೊಂಡಾಡಿದರು.
0 Post a Comment: