ಅಕ್ಟೋಬರ್ 18 ರ ಮುಂಜಾನೆ 12.59ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ
ಮಡಿಕೇರಿ (TOC ನ್ಯೂಸ್);ದಿನಾಂಕ 18-10-2019 ರ ಶುಕ್ರವಾರ ಮುಂಜಾನೆ 12 ಗಂಟೆ 59 ನಿಮಿಷಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತೀರ್ಥೋಧ್ಬವ ನಡೆಯಲಿದೆ. ಶ್ರೀ ಕಾವೇರಿ ತುಲಾಸಂಕ್ರಮಣ ಜಾತ್ರೆಯ ಪ್ರಯುಕ್ತ ಜರುಗುವ ಕಾರ್ಯಕ್ರಮಗಳು. ದಿನಾಂಕ 27-09-2019 ರ ಶುಕ್ರವಾರ ಬೆಳಿಗ್ಗೆ 09 ಗಂಟೆ 15 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು.ದಿನಾಂಕ 05-10-2019 ರ ಶನಿವಾರ ಬೆಳಿಗ್ಗೆ 08 ಗಂಟೆ 45 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ ದಿನಾಂಕ 15-10-2019 ರ ಮಂಗಳವಾರ ಮಧ್ಯಾಹ್ನ 12 ಗಂಟೆ 05 ನಿಮಿಷಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು. ದಿನಾಂಕ:- 15-10-2019 ರ ಮರಗಳ ಮಧ್ಯಾಹ್ನ 04 ಗಂಟೆ 31 ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇಡಲಾಗುವುದು ಎಂದು ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯ, ಭಾಗಮಂಡಲ,ಕೊಡಗು ಜಿಲ್ಲೆ.(ರಿ) ಆಡಳಿತ ಮಂಡಳಿ ಅಧಿಕೃತ ವಾಗಿ ತಿಳಿಸಿದ್ದಾರೆ.
0 Post a Comment: