ಬಿಜೆಪಿ ಭದ್ರಕೋಟೆ ಕಾವೇರಿ ತವರಿಗಿಲ್ಲ. ಸ್ವತಂತ್ರ ಉಸ್ತುವಾರಿ ಸಚಿವ ಸ್ಥಾನ...  | ಕೆ.ಎಂ ಇಸ್ಮಾಯಿಲ್ ಕಂಡಕರೆ


✍ ಕೆ.ಎಂ ಇಸ್ಮಾಯಿಲ್ ಕಂಡಕರೆ
(ಸಂಪಾದಕೀಯ TOC ನ್ಯೂಸ್ ಕೊಡಗು)
ಮಡಿಕೇರಿ: ಕೊಡಗು ಜಿಲ್ಲೆ ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಗ್ರಾಮ ಪಂಚಾಯತಿಯಿಂದ ಹಿಡಿದು, ಎಲ್ಲಾ ಸ್ಥಳೀಯ ಸಂಸ್ಥೆಗಳು, ಶಾಸಕರುಗಳು ಬಿಜೆಪಿಯವರೇ ಆಯ್ಕೆಯಾಗಿ ಬರುತ್ತಿದ್ದಾರೆ. ಕೈ-ತೆನೆ ದೋಸ್ತಿ ಸರ್ಕಾರ ಪತನವಾದ ನಂತರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಕೊಡಗು‌ ಜಿಲ್ಲೆಯ ಶಾಸಕರಾದ ಕೆ.ಜಿ ಬೋಪಯ್ಯ, ಹಾಗೂ ಮಡಿಕೇರಿ ಶಾಸಕ ಎಂ.ಪಿ‌ ಅಪ್ಪಚ್ಚು ರಂಜನ್ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಲಭಿಸುವ ನಿರೀಕ್ಷೆಯಿತ್ತು. ಆದರೆ ಕೊನೇ ಕ್ಷಣದಲ್ಲಿ ಶಾಸಕದ್ವಯರಿಗೆ ಸಚಿವ ಸ್ಥಾನ ಕೈ ತಪ್ಪಿತು. ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ೨೦೦೮ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಸ್ವೀಕರ್ ಆಗಿ‌ ಕಾರ್ಯನಿರ್ವಹಿಸಿದ ಕೆ.ಜಿ ಬೋಪಯ್ಯ ಅವರಿಗೆ ಮತ್ತೊಮ್ಮೆ ಸ್ಪೀಕರ್ ಪಟ್ಟ ಕಟ್ಟಲಾಗುವುದು ಎನ್ನಲಾಗಿತ್ತು .ಆದರೆ ಕೊನೆ ಕ್ಷಣದಲ್ಲಿ ಬೋಪಯ್ಯ ಅವರಿಗೆ ಸ್ಪೀಕರ್ ಕೈ ತಪ್ಪಿ, ಕಾಗೇರಿ ಅವರು ಸ್ಪೀಕರ್ ಆಗಿ ಆಯ್ಕೆಯಾದರು. ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಜಿಲ್ಲೆಯ ಜನರು ಬಿಜೆಪಿ ವಿರುಧ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೊಡಗು ಜಿಲ್ಲೆಗೆ ಪತ್ಯಕೇ ಉಸ್ತುವಾರಿ ಸಚಿವ ಸ್ಥಾನ ನೀಡದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೈಸೂರು ಉಸ್ತುವಾರಿಯಾದ ವಸತಿ ಸಚಿವ.ವಿ ಸೋಮಣ್ಣ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ. ಇದಕ್ಕೂ ಮೊದಲು ಕೊಡಗು ಜಿಲ್ಲೆಯಲ್ಲಿ ಜವಾಬ್ದಾರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೆಲ ದಿನಗಳ ಕಾಲ ಜಿಲ್ಲೆಯ ಉಸ್ತುವಾರಿ ವಹಿಸಿದ್ದರು. ಕೊಡಗು ಜಿಲ್ಲೆಗೆ ಪ್ರತ್ಯೇಕ ಉಸ್ತುವಾರಿ ಸಚಿವ ಸ್ಥಾನ ನೀಡದೇ ಕೊಡಗನ್ನು ‌ಮತ್ತೊಮ್ಮೆ ಬಿಜೆಪಿ ವಂಚಿಸಿದೆ. ಕೊಡಗು-ಮೈಸೂರು ಎರಡಕ್ಕೂ ಒಬ್ಬರೇ ಉಸ್ತುವಾರಿ ಎಂಬ ಆದೇಶವನ್ನು ಸರ್ಕಾರ ಹಿಂಪಡೆಯಬೇಕು‌ ಎಂದು ಜಿಲ್ಲೆಯ ಬಹುತೇಕರು ಹೇಳುತ್ತಿದ್ದಾರೆ. ಬಾಕ್ಸ್: ಕೊಡಗು ಜಿಲ್ಲೆಯ ಜನತೆ ಪ್ರವಾಹಕ್ಕೆ ತುತ್ತಾಗಿ ಮನೆ, ತಮ್ಮ ಆಸ್ತಿಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಹಾಗೂ ಸಂತ್ರಸ್ತರಿಗೆ ಶಾಶ್ವತ,ಸೂರು ಹಾಗೂ ಪರಿಹಾರ ನೀಡುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕಿದೆ. ಅಲ್ಲದೇ ಮೈಸೂರು ಹಾಗೂ ಕೊಡಗು ಉಸ್ತುವಾರಿ ವಹಿಸಕೊಂಡು ಕಾರ್ಯನಿರ್ವಹಿಸುವುದು ಈ ಸಂದರ್ಭದಲ್ಲಿ ಕಷ್ಟಕರವಾದ ವಿಷಯವಾಗಿದೆ. ಅಲ್ಲದೇ ಸಾಂಪ್ರದಾಯಿಕ ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಸೆಪ್ಟೆಂಬರ್ ೨೯ ರಿಂದ ಆರಂಭವಾಗುತ್ತಿದೆ. ಸಚಿವರು ದಸರಾದಲ್ಲೇ ಬ್ಯುಸಿ ಆಗಿರುತ್ತಾರೆ. ಇದರಿಂದ ಕೊಡಗು‌‌ ಜಿಲ್ಲೆಯ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ.. ಆದ್ದರಿಂದ ಕೊಡಗು ಜಿಲ್ಲೆಗೆ ಪ್ರತ್ಯೇಕ ಉಸ್ತುವಾರಿ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲೆಯ ಜನತೆ ಆಗ್ರಹಿಸಿದ್ದಾರೆ . ಕೆಲ ದಿನಗಳ ಕಾಲ ಕೊಡಗು ಉಸ್ತುವಾರಿ ವಹಿಸಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ,ಸುರೇಶ್ ಕುಮಾರ್ ಅವರನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ್ದರೆ.
Previous Post
Next Post

0 Post a Comment: