ನಾಪೋಕ್ಲು (TOC ನ್ಯೂಸ್ ) : ನಾಪೋಕ್ಲು ರೇಂಜ್ ನ ಎಸ್ ಬಿ ಎಸ್ ರಚನೆ ಮತ್ತು ತರಬೇತಿ ಶಿಬಿರ ಹಳೇತಾಲೂಕು ಸಿರಾಜುಲ್ ಇಸ್ಲಾಂ ಮದರಸದಲ್ಲಿ ನಡೆಯಿತು ರೇಂಜ್ ಮಿಷನರಿ ಅಧ್ಯಕ್ಷರಾದ ಅಬ್ದುಲ್ಲ ಸಖಾಫಿ ಕುಂಜಿರರವರ ಅಧ್ಯಕ್ಷತೆಯಲ್ಲಿ ರೇಂಜ್ ಕೋಶಾಧಿಕಾರಿ ಮುಹಮ್ಮದ್ ಮುಸ್ಲಿಯಾರ್ ಕಾನಂಗಾಡ್ ಉದ್ಘಾಟನೆ ನೆರವೇರಿಸಿದರು. ಬಶೀರ್ ಮುಸ್ಲಿಯಾರ್ ಚೆರೂಪ ವಿಷಯ ಮಂಡಿಸಿದರು. ಕೊಡಗು ಜಿಲ್ಲಾ ಜಂ-ಇಯ್ಯತುಲ್ ಮುಹಲ್ಲಿಮೀನ್ ಕಾರ್ಯದರ್ಶಿ ಅಶ್ರಫ್ ಸಖಾಫಿ ಎಮ್ಮೆಮಾಡು ಹಳೇ ತಾಲೂಕಿನ ಜಮಾಹತ್ ಅಧ್ಯಕ್ಷರಾದ ಮುಹಮ್ಮದ್ ಅಲಿ ಮುಖ್ಯ ಅತಿಥಿಗಳಾಗಿದ್ದರು.
ಎಸ್ ಬಿ ಎಸ್ ನಾಪೋಕ್ಲು ರೇಂಜ್ ಗೆ ಹೊಸ ನಾಯಕತ್ವ ಅಸ್ತಿತ್ವಕ್ಕೆ ಬಂತು.
ಅಧ್ಯಕ್ಷರಾಗಿ ತುಫೃಲ್ ಎಂ ಆರ್ ಕೊಳಕೇರಿ
ಪ್ರಧಾನ ಕಾರ್ಯದರ್ಶಿಯಾಗಿ ಶಾಮಿಲ್ ಬಿ ಎ ನಾಪೋಕ್ಲು ಕೋಶಾಧಿಕಾರಿಯಾಗಿ ಮುನವ್ವರ್ ಕಲ್ಲುಂಮೊಟ್ಟೆ ಮ್ಯಾಗಜಿನ್ ಅಧ್ಯಕ್ಷರಾಗಿ ಮುಹಮ್ಮದ್ ಸುಹೈಲ್ ಕೊಟ್ಟಮುಡಿ ಕಾರ್ಯದರ್ಶಿಯಾಗಿ ಅಖಿಲ್ ಅಬ್ದುಲ್ಲ ರವರನ್ನು ಮುಹಾಳರ ಅಧ್ಯಕ್ಷರಾಗಿ ಝೈನುಲ್ ಆಬಿದ್ ಕುಂಜಿಲ ಕಾರ್ಯದರ್ಶಿಯಾಗಿ ಹಾಶಿರ್ ಚೆರಿಯಪರಂಬು ರವರನ್ನು ಎಸ್ ಬಿ ಎಸ್ ಖರೇಂಜ್ ಮುದಬ್ಬಿರ್ ಗಳಾಗಿ ಅಬೂಬಕರ್ ಸಖಾಫಿ ಕೊಟ್ಟಮುಡಿ ಮತ್ತು ರಷೀದ್ ಮುಸ್ಲಿಯಾರ್ ಕೊಳಕೇರಿವರನ್ನು ಆಯ್ಕೆ ಮಾಡಲಾಯಿತು.



0 Post a Comment: