ಕುಶಾಲನಗರ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಯಾರೂ ಇಲ್ಲದೇ ನಿರ್ಗತಿಕಳಾಗಿದ್ದ ವೃದ್ಧೆಯನ್ನು ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಲ್ಲಿಗೆ ಸಮೀಪದ ಚಿಕ್ಕಂದೂರು ಬಸ್ ತಂಗುದಾಣದಲ್ಲಿ ಕಳೆದ ಆರು ತಿಂಗಳಿನಿಂದ ವಾಸಿವಿದ್ದ ಸುಮಾರು ೭೦ ವರ್ಷ ಪ್ರಾಯವುಳ್ಳ ವೃದ್ಧೆಯನ್ನು ಮಡಿಕೇರಿಯ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಸೇರಿಸಲಾಗಿದೆ. ಚಿಕ್ಕಂದೂರು ಬಸ್ ನಿಲ್ದಾಣದಲ್ಲಿದ್ದ ವೃದ್ಧೆಯನ್ನು ಕಂಡ ಶನಿವಾರಸಂತೆ ಕರವೇ ಉಪಾಧ್ಯಕ್ಷ ರಾಕೇಶ್ ಅವರು, ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಕರವೇ ಕಾರ್ಯಕರ್ತರ ತಂಡ ಬಸ್ ನಿಲ್ದಾಣದಲ್ಲಿ ತಂಗಿರುವ ವೃದ್ಧೆಯನ್ನು ಉಪಚರಿಸಿ ಶಕ್ತಿ ವಸತಿ ನಿಲಯಕ್ಕೆ ಸೇರಿಸಿದ್ದಾರೆ. ನಂತರ ಮಾತನಾಡಿದ ಕರವೇ ತಾ.ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ವೃದ್ಧೆಯೋರ್ವಳು ಬಸ್ ನಿಲ್ದಾಣದಲ್ಲಿ ಅನಾಥಳಾಗಿ ಬಿದ್ದಿರುವುದನ್ನು ಕಂಡು ಕರವೇ ಯಿಂದ ಉಪಚರಿಸಿ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಸೇರಿಸಲಾಗಿದೆ. ಸಾರ್ವಜನಿಕರು ಇಂತಹ ಅನಾಥರಿಗೆ ನೆರವು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಬೇಕು ಎಂದರು. ಈ ಸಂದರ್ಭ ಕರವೇ ಕಾರ್ಯಕರ್ತರಾದ ರಾಮನಹಳ್ಳಿ ರಶೀದ್, ಅಶ್ವತ್ ಇದ್ದರು.
ಅನಾಥ ವೃದ್ಧೆಗೆ ದಾರಿ ದೀಪವಾದ ಕರವೇ
Categories:
Featured
ಕೊಡಗು
Publish Date:
سبتمبر 03, 2019

0 Post a Comment: