ಪ್ರಧಾನಮಂತ್ರಿಯವರ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ 


ಮಡಿಕೇರಿ ಸೆ.07(TOC ಕೊಡಗು):-ಪ್ರಸಕ್ತ (2019-20) ಸಾಲಿನ ಪ್ರಧಾನಮಂತ್ರಿಯವರ ಶಿಷ್ಯವೇತನವನ್ನು ವೃತ್ತಿಪರ ಪದವಿ ತರಗತಿಗಳಲ್ಲಿ ಈ ವರ್ಷ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ಮಾಜಿ ಸೈನಿಕರ ಮಕ್ಕಳಿಗೆ ಮಂಜೂರು ಮಾಡಲು ಕೇಂದ್ರೀಯ ಸೈನಿಕ ಮಂಡಳಿಯಿಂದ ಆದೇಶ ಹೊರಡಿಸಿದ್ದು. ಅದರ ವಿವರ ಪಡೆಯಲು ಮಾಜಿ ಸೈನಿಕರು ಆನ್‍ಲೈನ್ ವಿಳಾಸ www.ksb.gov.in ಸಂಪರ್ಕಿಸುವಂತೆ ತಿಳಿಸಲಾಗಿದೆ.
                    ---- ಜಾಹೀರಾತು ----

ಈ ಶಿಷ್ಯವೇತನವು ಕನಿಷ್ಠ ವಿದ್ಯಾರ್ಹತೆ 10+2 ಡಿಪ್ಲೋಮ, ಪದವಿಯಲ್ಲಿ ಕನಿಷ್ಠ ಶೇ.60 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್, 31 ಕೊನೆಯ ದಿನವಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ ಅವರು ತಿಳಿಸಿದ್ದಾರೆ.
                          ---- ಜಾಹೀರಾತು  ----

Previous Post
Next Post

0 Post a Comment: