ಬೆಂಗಳೂರು (TOC ನ್ಯೂಸ್) : ಮಾಜಿ ಸಂಸದ ದಿವಂಗತ ಅನಂತ್ ಕುಮಾರ್ ಬಳಸುತ್ತಿದ್ದ ಕಚೇರಿ ಬೇಡವೆಂದು ಮಕ್ಕಳ ಗ್ರಂಥಾಲಯ ಜಾಗದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಅಧಿಕೃತ ಕಚೇರಿ ಪ್ರಾರಂಭ ಮಾಡುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕ್ಷೇತ್ರದ ಜನರ ಜೊತೆಗೆ ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುಎನ್‍ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಸೌಮ್ಯಾರೆಡ್ಡಿ, ತಾವು ಜಯನಗರದ ಸ್ಥಳೀಯ ಶಾಸಕಿ. ಜಯನಗರ ವ್ಯಾಪ್ತಿಗೆ ಬರುವ ಬಿಬಿಎಂಪಿ ಕಟ್ಟಡದಲ್ಲಿ ಕಚೇರಿ ಪ್ರಾರಂಭಿಸುವ ಬಗ್ಗೆ ಸಂಸದರು ವಿಚಾರವನ್ನು ತಮ್ಮ ಗಮನಕ್ಕೆ ತಾರದೇ ನೇರವಾಗಿ ಬಿಬಿಎಂಪಿ ಆಯುಕ್ತರಿಂದಲೇ ಕಚೇರಿಯನ್ನು ನಿಗದಿ ಮಾಡಿಸಿಕೊಂಡಿದ್ದಾರೆ. ನಾನು ವಿಜಯ್ ಕುಮಾರ್ ಅವರು ಬಳಸುತ್ತಿದ್ದ ಶಾಸಕರ ಕಚೇರಿಯನ್ನೇ ಬಳಸುತ್ತಿದ್ದೇನೆ. ಅನಂತ್ ಕುಮಾರ್ ಅವರ ಕಚೇರಿ ಚೆನ್ನಾಗಿಯೆ ಇದೆ. ಅದನ್ನೇ ತೇಜಸ್ವಿ ಸೂರ್ಯ ಬಳಸಬಹುದಿತ್ತು. ಆದರೆ ಹೀಗೆ ಏಕೆ ಗ್ರಂಥಾಲಯವಿರುವ ಜಾಗದಲ್ಲಿ ಕಚೇರಿಯನ್ನು ಪ್ರಾರಂಭಿಸುತ್ತಿದ್ದಾರೋ ಗೊತ್ತಿಲ್ಲ ಎಂದರು.

0 Post a Comment: