ರಾಂಧವ ಚಿತ್ರ ನಟನ ವಿರುದ್ಧ ಆಕ್ರೋಶ 


ಕುಶಾಲನಗರ: ಇತ್ತೀಚೆಗೆ ಬಿಡುಗಡೆಯಾದ 'ರಾಂಧವ' ಚಿತ್ರದ ನಾಯಕನಾದ ಭುವನ್ ಪೊನ್ನಣ್ಣನವರ ವಿರುದ್ಧ ನಟ ಚೀಯಂಡಿರ ಕಿಷನ್‌‌ ಉತ್ತಪ್ಪನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಭುವನ್ ಪೊನ್ನಣ್ಣನವರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ತಾಂತ್ರಿಕ ವರ್ಗದವರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದರ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಶೇ.೮೫ರಷ್ಟು ಡಬ್ಬಾ ಚಿತ್ರಗಳು ಎಂದು ಕನ್ನಡ ಸಿನಿರಂಗವನ್ನು ಅವಮಾನಿಸಿದ್ದಾರೆ ಎಂದು ಕಿಷನ್ ಉತ್ತಪ್ಪನವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಭುವನ್ ಪೊನ್ನಣ್ಣನವರು ಕ್ಷಮೆ ಯಾಚಿಸದಿದ್ದಲ್ಲಿ ಯುವನಟ ಚೀಯಂಡಿರ ಕಿಷನ್ ಉತ್ತಪ್ಪನವರು ಭುವನ್ ಪೊನ್ನಣ್ಣನವರ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ‌. ಭುವನ್ ಪೊನ್ನಣ್ಣನವರ ಹೇಳಿಕೆಗೆ ಹಲವು ಸಿನಿಪ್ರಿಯರು, ಕನ್ನಡ ಚಿತ್ರರಂಗದ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Previous Post
Next Post

0 Post a Comment: