ಕಾರವಾರ (TOC ನ್ಯೂಸ್): ಕಾಲೇಜಿನಲ್ಲಿ ಮೊಬೈಲ್ ತಂದು ಪಾಠ ಕೇಳುವ ಬದಲು ವಿದ್ಯಾರ್ಥಿಗಳು ಚಾಟ್ ಮಾಡುವುದೇ ಹೆಚ್ಚಾಗಿದೆ. ಇವುಗಳಿಗೆ ಬ್ರೇಕ್ ಹಾಕಲು ಪ್ರಾಂಶುಪಾಲರು ವಿದ್ಯಾರ್ಥಿಗಳ ಮೊಬೈಲ್‍ನನ್ನು ಸುತ್ತಿಗೆಯಿಂದ ಹೊಡೆದು ಹಾಕಿರುವ ಘಟನೆ ಉತ್ತರ ಕನ್ನಡದ ಶಿರಸಿ ನಡೆದಿದೆ.
ಶಿರಸಿ ಎಂಇಎಸ್ ಚೈತನ್ಯ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡ ಮೊಬೈಲ್ ಅನ್ನು ಅವರ ಸಮ್ಮುಖದಲ್ಲೇ ಸುತ್ತಿಗೆಯಿಂದ ಪ್ರಾಂಶುಪಾಲರು ಹೊಡೆದು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಜೊತೆ ಮೊಬೈಲ್ ನಿಂದ ಆಗುವ ಪರಿಣಾಮ ಕುರಿತು ವಿವರಿಸಿದ್ದಾರೆ.

0 Post a Comment: