ರಸ್ತೆಗುಂಡಿ ಮುಚ್ಚಿ ಮಾನವೀಯತೆ ಮೆರೆದ ಆಟೋ ಚಾಲಕರು  


ವರದಿ : ತೌಸಿಫ್ ಅಹ್ಮದ್ ಅಮ್ಮತ್ತಿ
ಅಮ್ಮತ್ತಿ ( TOC ನ್ಯೂಸ್) : ಅಮ್ಮತ್ತಿಯ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಗ್ರಾಮದ ಆಟೋಚಾಲಕರು‌ ಮಾನವೀಯತೆ ಮೆರೆದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೆ ರಸ್ತೆಗಳು ದುರಸ್ತಿ ಮಾಡಿಸಲಾಗಿತ್ತು , ಆದರೆ ಈಗಾಗಲೆ ರಸ್ತೆಗಳು ಗುಂಡಿ ಬಿದ್ದಿದ್ದು ಸಾರ್ವಜನಿಕರಿಗೂ , ವಾಹನ ಸವಾರರಿಗು ಸಾಗುವುದು ಅಪಾಯಕಾರಿಯಾಗಿದೆ. ಇದನ್ನು ಮನಗಂಡ ಅಮ್ಮತ್ತಿಯ ಆಟೋ ಚಾಲಕರು ಹಳ್ಳಕೊಳ್ಳಗಳನ್ನು ಮುಚ್ಚಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂಧರ್ಭ ಪ್ರಮುಖರಾದ ತೀರ್ಥ ಬಾಲಕೃಷ್ಣ , ಪಾಪಣ್ಣ , ರಂಶೀದ್ , ನಿಜ಼ಾರ್ , ಉಣ್ಣಿ ಕೃಷ್ಣ , ಶಜೀರ್, ಶೌಕತಲಿ ಹಾಗು ಇನ್ನಿತರರು ಉಪಸ್ಥಿತರಿದ್ದರು.


Previous Post
Next Post

0 Post a Comment: