ಮಡಿಕೇರಿ ದಸರಾ: ಒಂದು ಕೋಟಿ ಅನುದಾನ 


ಮಡಿಕೇರಿ (TOC ನ್ಯೂಸ್) : ಮಡಿಕೇರಿ ನಗರ ದಸರಾ ಜನೋತ್ವವಕ್ಕೆ ಈ ಬಾರಿ ಭಜ೯ರಿ ಸ್ಪಂದನ ಸಕಾ೯ರದಿಂದ ದೊರಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ನಗರ ದಸರಾ ಸಮಿತಿ ನಿಯೋಗವು 1 ಕೋಟಿ ರುಪಾಯಿ ಪ್ರಸ್ತಾವನೆಯನ್ನು ಸಿಎಂ ಮುಂದಿಟ್ಟು ಅನುದಾನ ಬಿಡುಗಡೆಗೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಸಿಎಂ 1 ಕೋಟಿ ರು. ಅನುದಾನ ನೀಡುವಂತೆ ಇಲಾಖೆಗೆ ಸೂಚಿಸಿದ್ದಾರೆ. ಮಡಿಕೇರಿ ದಸರಾ ಸಮಿತಿ ನಿಯೋಗದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಹ್ಮಣಿ, ದಸರಾ ಸಮಿತಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾಯ೯ದಶಿ೯ ಬಿ.ಕೆ.ಜಗದೀಶ್, ಉಪಾಧ್ಯಕ್ಷ ನೆರವಂಡ ಜೀವನ್, ಖಜಾಂಜಿ ಉಮೇಶ್ ಸುಬ್ರಹ್ಮಣಿ, ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ ಇದ್ದರು. ಗೋಣಿಕೊಪ್ಪಲು ದಸರಾಕ್ಕೂ ಈ ಬಾರಿ 30 ಲಕ್ಷ ರುಪಾಯಿ ಅನುದಾನವನ್ನು ಶಾಸಕ ಕೆ.ಜಿ.ಬೋಪಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಮೂಲಕ ನೀಡಿದ್ದಾರೆ.
Previous Post
Next Post

0 Post a Comment: