ಗೋವಾಗೆ ತೆರಳಿ ರಕ್ತದಾನ ಮಾಡಿದ ಮಾಡಿದ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸದಸ್ಯರು


ಮಂಗಳೂರು (TOC ದ.ಕ): ಸೆಪ್ಟೆಂಬರ್ 04 ರಂದು ಗೋವಾದ ಬಾಂಬೊಲಿಮ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಅಬ್ದುಲ್ ಖಾದರ್ ಎಂಬ ರೋಗಿಯು ಚಿಕಿತ್ಸೆ ಪಡೆಯುತ್ತಿದ್ದು ಇವರಿಗೆ ಐದು ಯುನಿಟ್ ಎಬಿ ನೆಗಟಿವ್ ತುರ್ತು ರಕ್ತದ ಅಗತ್ಯದ ಬೇಡಿಕೆಯ ಕರೆಯು ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಕಾರ್ಯ ನಿರ್ವಾಹಕರಿಗೆ ತಲುಪಿತ್ತು. ಈ ಸಂಧರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಬ್ಲಡ್ ಡೋನರ್ಸ್ ಸಂಸ್ಥೆಯ ಕಾರ್ಯನಿರ್ವಾಹಕರು, ತಂಡದ ಕಾರ್ಯಕರ್ತರಿಗೆ ವಿಷಯ ತಿಳಿಸಲಾಯಿತು. ಕಾರ್ಯ ನಿರ್ವಾಹಕರ ಫೋನ್ ಕರೆಯೊಂದಕ್ಕೆ ಹಲವು ದಾನಿಗಳು ರಕ್ತ ನೀಡಲು ದೂರದ ರಾಜ್ಯ ಗೋವಕ್ಕೆ ಹೋಗಲು ಹಿಂದೇಟು ಹಾಕಿದಾಗ ಕರಾವಳಿ ಮತ್ತು 

ಗಡಿ ಪ್ರದೇಶ ಕೇರಳದ ಯುವಕರು ತಮ್ಮ ಯೆಲ್ಲಾ ದೈನಂದಿನ ಕೆಲಸಕಾರ್ಯವನ್ನು ಬಿಟ್ಟು ದೂರದ ಗೋವಕ್ಕೆ ತೆರಳಿ ಸ್ವಯಂ ರಕ್ತದಾನ ಮಾಡಿದ ಬ್ಲಡ್ ಡೋನರ್ಸ್ ಸಂಸ್ಥೆಯ ಸದಸ್ಯರಾದ ಅಝರ್ ವಿಟ್ಲ, ಜಾವೇದ್ ಕುತ್ತಾರ್, ರಮೇಶ್ ಕಾಸರಗೋಡ್ ಮಾಹಿಪಾಡಿ ರಕ್ತದಾನ ಮಾಡಿ ಇತರ ಯುವಕರಿಗೆ ಮಾದರಿಯಾಗಿ ಈ ಮೂಲಕ ಒಂದು ಜೀವ ಉಳಿಸುವಲ್ಲಿ ಯಶಸ್ವಿಯಾದರು. ಬ್ಲಡ್ ಡೋನರ್ಸ್ ಮಂಗಳೂರು ತಂಡವು ಕಳೆದ ಆರು ವರ್ಷಗಳಿಂದ ಕರ್ನಾಟಕದ, ಕೇರಳ ಮತ್ತು ಇತರೆ ರಾಜ್ಯಗಳಲ್ಲಿ, ಮತ್ತು ವಿದೇಶದಲ್ಲಿ ನಿರಂತರವಾಗಿ ರಕ್ತದಾನ ಶಿಬಿರ ಹಾಗೂ ರಕ್ತ ಪೂರೈಕೆ ಆಯೋಜಿಸುತ್ತಲೇ ಬಂದಿದೆ. ಆರು ವರ್ಷಗಳಲ್ಲಿ ಇನ್ನೂರು ರಕ್ತದಾನ ಶಿಬಿರ ಹದಿನೆಂಟು ಸಾವಿರಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಿ ಪೂರೈಕೆ ಮಾಡಿದೆ. - ವರದಿ : ಮಾಧ್ಯಮ ವಿಭಾಗ ಬಿ.ಡಿ.ಎಂ
Previous Post
Next Post

0 Post a Comment: