ಅನ್ವಾರುಲ್ ಹುದಾದಲ್ಲಿ ಎಸ್ಸೆಸ್ಸೆಫ್ ದ್ವಜ ದಿನಾಚರಣೆ


ವಿರಾಜಪೇಟೆ (TOC ನ್ಯೂಸ್ ಕೊಡಗು) : ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಕೇಂದ್ರ ಅನ್ವಾರುಲ್ ಹುದಾದಲ್ಲಿ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಅಬ್ದುರ್ರಶೀದ್ ಸಅದಿ ಧ್ವಜಾರೋಹಣ ಮಾಡಿದರೆ ರಾಜ್ಯ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ರವರು ಮುಖ್ಯ ಭಾಷಣ ಮಾಡಿ ಸಂಘಟನೆ ಹಾದು ಬಂದ ಹಾದಿ ಹಾಗೂ ಎಸ್ಸೆಸ್ಸೆಫ್' ಮಾಡಿದ ಕ್ರಾಂತಿಯ ಬಗ್ಗೆ ವಿವರಣೆ ನೀಡಿದರು. ಖಮರುದ್ದೀನ್ ಸಖಾಫಿಯವರು ಕ್ರಾಂತಿ ಗೀತೆ ಹಾಡಿದರೆ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆ ಪ್ರಾಧ್ಯಾಪಕರದ ಅಬ್ದುರ್ರಹ್ಮಾನ್ ಅಹ್ಸನಿ. ಶಫೀಖ್ ಸಖಾಫಿ ಜಲೀಲ್ ಸಖಾಫಿ, ಜುನೈದ್ ಅನ್ವಾರಿ, ರಝಾಕ್ ಮಿಸ್ಬಾಹಿ, ಅಹ್ಮದ್ ಮದನಿ, ಇಬ್ರಾಹಿಂ ಮಾಸ್ಟರ್, ಸುಫಿಯಾನ್ ಅನ್ವಾರಿ, ರಶೀದ್ ಸಖಾಫಿ, ಸತ್ತಾರ್ ಚೇರಂಬಾಣೆ ಉಪಸ್ಥಿತರಿದ್ದರು ಶಕೀರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರೆ ಜಲೀಲ್ ಅಮೀನಿ ಸ್ವಾಗತಿಸಿ ದಅವಾ ವಿಂಗ್ ಕಾರ್ಯದರ್ಶಿ ಶಾಫಿದ್ ವಂದಿಸಿದರು.

Previous Post
Next Post

0 Post a Comment: