ಮಾರ್ಚ್ 20 ರಿಂದ ಕೊಂಡಂಗೇರಿ ಮಖಾಂ ಉರೂಸ್ 


ಸಿದ್ದಾಪುರ: ಇತಿಹಾಸ ಪ್ರಸಿದ್ಧ ಕೊಂಡಂಗೇರಿ ಅಸಯ್ಯದ್ ಅಬ್ದುಲ್ಲಾಹಿ ಸಖಾಫ್ ದರ್ಗಾ ಶರೀಫ್ ಉರೂಸ್ 2020 ಮಾರ್ಚ್ 20 ರಿಂದ 27 ರ ವರೆಗೆ ನಡೆಸಲು ತೀರ್ಮಾನಿಸಿರುವುದಾಗಿ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ ಯೂಸುಫ್ ಹಾಜಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಧಾರ್ಮಿಕ ಪಂಡಿತರು, ನೇತಾರರು, ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. 
ಸಮಿತಿಯ ಪ್ರಮುಖ ಅಬ್ದುಲ್ ರೆಹಮಾನ್ (ಅಂದಾಯಿ) ಮಾತನಾಡಿ, ಕೊಂಡಂಗೇರಿ ಉರೂಸ್ ನಲ್ಲಿ ವಿವಿಧ ರಾಜ್ಯಗಳಿಂದಲೂ ಜಾತಿ, ಮತ, ಭೇದ ಇಲ್ಲದೆ ಭಕ್ತಾದಿಗಳು ಆಗಮಿಸಲಿದ್ದು, ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭ ಪ್ರಮುಖರಾದ ಶಾದುಲಿ, ಯಹ್ಯ, ಅಲಿ, ಅಬ್ಬಾಸ್, ಅಬ್ದುಲ್ಲಾ ಹಾಜಿ, ಮಜೀದ್ ಇದ್ದರು.
Previous Post
Next Post

0 Post a Comment: