ಎಸ್ಸೆಸ್ಸೆಫ್ ಸಿದ್ದಾಪುರ ಸೆಕ್ಟರ್ ; ಉಲಾಝ್ ಮತ್ತು ಕ್ಯೂ ಟೀಂ ಕ್ಯಾಂಪ್


ಸಿದ್ಧಾಪುರ (TOC ನ್ಯೂಸ್) : ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸಿದ್ದಾಪುರ ಸೆಕ್ಟರ್ ವತಿಯಿಂದ ಉಲಾಝ್ ಮತ್ತು ಕ್ಯೂ ಟೀಂ ಕ್ಯಾಂಪ್ ಸೆಪ್ಟಂಬರ್ 15ರಂದು ದಾರುನ್ನಜಾತ್ ಸುನ್ನಿ ಮದರಸಾ ಹಾಲ್ ನಲ್ಲಿ ಸೆಕ್ಟರ್ ಸಮಿತಿ ಅಧ್ಯಕ್ಷರಾದ ರಝಾಖ್ ಸಅದಿ ರವರ ಅಧ್ಯಕ್ಷತೆಯಲ್ಲಿ ಸೆಕ್ಟರ್ ಸಮಿತಿ ಉಪಾಧ್ಯಕ್ಷರಾದ ಸಯ್ಯದ್ ವಿ.ಪಿ.ಎಸ್ ಶಿಹಾಬ್ ತಂಙಳ್ ಉದ್ಘಾಟಿಸಿದರು. ಉಲಾಝ್ ಕ್ಯಾಂಪ್ ತರಗತಿ ಸಿದ್ದಾಪುರ ಸೆಕ್ಟರ್ ಸಮಿತಿ ಉಪಾಧ್ಯಕ್ಷರಾದ ಹಂಝ ರಹ್ಮಾನಿ ಹಾಗೂ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಸ್ವಬಾಹ್ ಹಿಮಮಿ ಸಖಾಫಿ ವಿಷಯ ಮಂಡಿಸಿದರು. ಕ್ಯೂ ಟೀಂ ಕ್ಯಾಂಪ್ ತರಗತಿ ವಿರಾಜಪೇಟೆ ಡಿವಿಷನ್ ಅಧ್ಯಕ್ಷರಾದ ಝುಬೈರ್ ಸಅದಿ ಅಲ್ ಅಫ್ಳಲಿ ವಿಷಯ ಮಂಡಿಸಿದರು. ಪ್ರ. ಕಾರ್ಯದರ್ಶಿ ನಿಝಾಂ ಕಂಡಕ್ಕರ ಸ್ವಾಗತಿಸಿ ಕ್ಯೂ ಟೀಂ ಮೆಂಡರ್ ಜಂಶಾದ್ ಸಖಾಫಿ ವಂದಿಸಿದರು.



Previous Post
Next Post

0 Post a Comment: