ಜಿಲ್ಲಾ ಮಟ್ಟದ ದೇಶ ಭಕ್ತಿ ಗೀತಗಾಯನ ಸ್ಪರ್ಧೆ


ಮಡಿಕೇರಿ (TOC ನ್ಯೂಸ್): ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಇವರ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಜಿಲ್ಲಾ ಮಟ್ಟದ ದೇಶ ಭಕ್ತಿ ಗೀತಗಾಯನ ಸ್ಪರ್ಧೆಯು ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರಾದ ನೂರುನ್ನಿಸ ಅವರು ಮಾತನಾಡಿ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ಇತ್ತಿಚೀನ ದಿನಗಳಲ್ಲಿ ಸಂಸ್ಕøತಿಯು ನಶಿಸುತ್ತಿದೆ. ಇದರಿಂದ ಯುವ ಜನರು ಸಹೋದರತೆ, ಭ್ರಾತೃತ್ವ ಭಾವನೆ ಬೆಳೆಸಬೇಕು. ಹಾಗೆಯೇ ಆಚಾರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು. 
ಜನಪದ, ದೇಶಭಕ್ತಿ ಗೀತೆ, ಭರತನಾಟ್ಯ ಇಂತಹ ಕಲೆಗಳನ್ನು ಮರೆಯುವಂತಾಗುತ್ತಿದೆ. ಆದ್ದರಿಂದ ಮಕ್ಕಳಲ್ಲಿ ಇದರ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವಂತಾಗಬೇಕು. ಸಂಸ್ಕøತಿ ಉಳಿಸಿ ಬೆಳಸಬೇಕೆಂದು ಅವರು ಹೇಳಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಗೀತಾಗಾಯನ ಕಾರ್ಯಕ್ರಮ ಸಹಕಾರಿಯಾಗಿದ್ದು, ಇಂತಹ ವೇದಿಕೆಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹೇಳಿದರು. 
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನತೆ ಭಯ ಭೀತರಾಗದೆ ಪ್ರವಾಸ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿದರು ಎಂದರು. 
ಜಿಲ್ಲಾ ಪ್ರಧಾನ ಆಯುಕ್ತರಾದ ಕಂಬಿರಂಡ ಕಿಟ್ಟು ಕಾಳಪ್ಪ, ರಾಣಿ ಮಾಚಯ್ಯ. ಬೈತಡ್ಕ ಜಾನಕಿ, ಗೌರು ಗಣಪತಿ, ಖಜಾಂಜಿಯಾದ ಸುನೀಲ್, ಜಿಲ್ಲಾ ಸ್ಕೌಟ್ಸ್ ಪ್ರಧಾನ ಆಯುಕ್ತರು ಜಿಮ್ಮಿ ಸ್ವಿಕ್ವೆರ ಮತ್ತಿತರರು ಪಾಲ್ಗೊಂಡಿದ್ದರು. ತಾಲೂಕು ಮಟ್ಟದ ಸ್ಥಳೀಯ ಸಂಸ್ಥೆ ಪ್ರಥಮ ಸ್ಥಾನ ಪಡೆದ ಗೈಡ್ಸ್ ಮತ್ತು ಸ್ಕೌಟ್ಸ್ ತಂಡದ ಕಬ್ ಮತ್ತು ಬುಲ್‍ಬುಲ್‍ಗಳು ಹಾಗೂ ರೋವರ್ ಮತ್ತು ರೇಂಜರ್‍ಗಳು ಭಾಗವಹಿಸಿದ್ದರು. ದಯಮಂತಿ ಅವರು ನಿರೂಪಿಸಿದರು.
Previous Post
Next Post

0 Post a Comment: